ಅಲ್ಲ, ಆಕೆ ಸುದ್ದಿಗಳು ಹೇಳುವಂತೆ ರಾಜಸ್ಥಾನವನ್ನು ಕಾಪಾಡುತ್ತಿರುವ ಭಾರತೀಯ ಸೇನೆಯ ಜವಾನ್ ಅಲ್ಲ

ಸೈನ್ಯದ ಸಮವಸ್ತ್ರದಲ್ಲಿರುವ ಮಹಿಳೆಯೊಬ್ಬಳ ಛಾಯಾಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ “ಈಕೆ ಈ ಭೀಕರ ಬಿಸಿಯಲ್ಲಿ ರಾಜಸ್ಥಾನವನ್ನು ಕಾವಲು ಕಾಯುತ್ತಿರುವ ಭಾರತೀಯ ಸೇನೆಯ ಜವಾನ್. ಜೈ ಹಿಂದ್” ಎಂಬ ಶೀರ್ಷಿಕೆಯೊಂದಿಗೆ ಷೇರ್ ಆಗುತ್ತಿದೆ. @bhai_rampal ಎಂಬ ಟ್ವಿಟರ್ ಹ್ಯಾಂಡಲ್ ನಿಂದ ಇದನ್ನು ಷೇರ್ ಮಾಡಲಾಗಿತ್ತು ಮತ್ತು ನಂತರ ಇದನ್ನು ಹಲವರು ರೀಟ್ವೀಟ್ ಮಾಡಿದರು ಮತ್ತು ಫೇಸ್ಬುಕ್ ನಲ್ಲಿಯೂ ಶೇರ್ ಮಾಡಿದರು. राजस्थान के तपते रेगिस्तान में पहरा देती भारतीय जवान जय हिंद जय भारत pic.twitter.com/2tze9ls5jw — Rampal Bhai (@bhai_rampal) May ...

Read More »

ನ್ಯೂಯಾರ್ಕ್ ನಲ್ಲಿ $5 ನೋಟುಗಳನ್ನು ಎಸೆಯುವ ಮೂಲಕ ಮೋದಯವರ ವಿಜಯವನ್ನು ಆಚರಿಸಿದರೇ ಭಾರತೀಯ ಕೋಟ್ಯಾಧಿಪತಿ?

ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಯ ವಿಜಯವು ಸಾಮಾಜಿಕ ಮಾಧ್ಯಮದಲ್ಲಿ ಹಲವು ವೀಡಿಯೋಗಳ ಹರಿದಾಟಕ್ಕೆ ಎಡೆಮಾಡಿದೆ. ಆದರೆ ಈ ಒಂದು ವೀಡಿಯೊ ನಿಜವಾಗಿಯೂ ವೈರಲ್ ಆಗಿದೆ, ಇದನ್ನು ಮೇ 24, 2019 ರಂದು “ಎಎಸ್ ನ್ಯೂಸ್ ಏಂಡ್ ವೈರಲ್ ವೀಡಿಯೊಸ್” ಇಂದ ಯುಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೊ ಇದುವರೆಗೆ 3,663 ವ್ಯೂಗಳನ್ನು ಪಡೆದಿದೆ. ವಿಡಿಯೋದ ವಿವರಣೆ ಹೀಗಿದೆ, “ಹಾಯ್, ನಾನು ಕಪಿಲ್ ಠಾಕೂರ್. ನಮ್ಮ ಯೂಟ್ಯೂಬ್ ಚಾನಲ್ ‘ಎಎಸ್ ನ್ಯೂಸ್ ಏಂಡ್ ವೈರಲ್ ವೀಡಿಯೊಸ್’ಗೆ ನಿಮಗೆ ಸ್ವಾಗತ. ಈ ವೀಡಿಯೊದಲ್ಲಿ ನಾವು ನಿಮಗೆ ...

Read More »

ವೈರಲ್ ವೀಡಿಯೋ ಹೇಳುವಂತೆ ಹಿಂದೂ ಧರ್ಮಕ್ಕೆ ಮರು ಮತಾಂತರಗೊಂಡರೇ ಜಗನ್?

“ಆಂಧ್ರ ಪ್ರದೇಶದ ಮುಖ್ಯಮಂತ್ರಿ-ಆಯ್ಕೆ ಜಗನ್ ಮೋಹನ ರೆಡ್ಡಿಯವರು ಬಿಜೆಪಿಯ ಆಗ್ರಹದ ಮೇರೆಗೆ ಹಿಂದೂ ಧರ್ಮಕ್ಕೆ ಮರು-ಮತಾಂತರಗೊಂಡರು” ಎನ್ನುವ ಒಂದು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಮೇ 23 ರಂದು ವಿಧಾನಸಭಾ ಚುನಾವಣೆಗಳಲ್ಲಿ ಜಗನ್ ಮತ್ತವರ ಪಕ್ಷ YSRCP ಜಯಗಳಿಸಿದಾಗಿನಿಂದ ಈ ವೀಡಿಯೊ ವೈರಲ್ ಆಗುತ್ತಲಿದೆ. ಇಲ್ಲಿ ವೀಡಿಯೊ ನೋಡಿ: ಕೆಳಗೆ ತೋರಿಸಿದಂತೆ WhatsApp ನಲ್ಲಿಯೂ ಸಹ ಈ ವೀಡಿಯೊವನ್ನು ಹಲವರು ಷೇರ್ ಮಾಡಿದ್ದಾರೆ: ಕೆಲವು ಮೂಲ ವಿವರಗಳು ಹೀಗಿವೆ: ಜಗನ್ ಮೋಹನ್ ರೆಡ್ಡಿಯವರು ನಿಧನರಾದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ...

Read More »

ಹಿಮಾಚಲ ಪ್ರದೇಶದಲ್ಲಿ ಮಹಿಳೆಯೊಬ್ಬರು ಬಿಜೆಪಿ ಶಾಸಕರನ್ನು ಹೊಡೆದರೆಂದು ಸಾಧಿಸುವ ವೀಡಿಯೊ; ವಾಸ್ತವಾಂಶದ ಪರೀಕ್ಷೆ

ಈ ತಿಂಗಳ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಫೇಸ್‌ಬುಕ್ ಪುಟದಲ್ಲಿ ಹಾಕಲಾದ ವಿಡಿಯೊ ಒಂದು ವೈರಲ್ ಆಗಿದೆ. ಆ ವಿಡಿಯೊದಲ್ಲಿ ಮಹಿಳೆಯೊಬ್ಬರು ಹಿಮಾಚಲ ಪ್ರದೇಶದಲ್ಲಿ ನಾಯಕನೊಬ್ಬನನ್ನು ಚಪ್ಪಲಿಯಿಂದ ಹೊಡೆಯುತ್ತಿರುವುದು ಕಂಡುಬರುತ್ತದೆ. 32 ಸೆಕೆಂಡುಗಳಷ್ಟಿರುವ ವಿಡಿಯೊದಲ್ಲಿ, ಹಿಮಾಚಲ್ ಪರಿವಾಹನ್ ಮಜ್ದೂರ್ ಸಂಘದ ಸಭೆಯಲ್ಲಿ ಇಬ್ಬರು ಮಹಿಳೆಯರು ಹೂಗುಚ್ಚದೊಂದಿಗೆ ನಾಯಕರೊಬ್ಬರ ಬಳಿ ನಡೆದು ಬರುತ್ತಿರುವುದು ಕಂಡು ಬರುತ್ತದೆ. ಇದ್ದಕ್ಕಿದ್ದಂತೆ ಒಬ್ಬ ಮಹಿಳೆಯು ತನ್ನ ಕಾಲಿನಿಂದ ಚಪ್ಪಲಿಯನ್ನು ತೆಗೆದು ನಾಯಕನನ್ನು ಹೊಡೆಯಲು ಆರಂಭಿಸುತ್ತಾಳೆ. ಸುತ್ತುವರಿದ್ದಿದ್ದ ಜನರು ಅವಳನ್ನು ತಡೆಯುತ್ತಿರುವ ದೃಶ್ಯವು ಕಂಡು ಬರುತ್ತದೆ. ಕೆಳಗೆ ನೀಡಿರುವ ವಿಡಿಯೊವನ್ನು ನೋಡಿ: ಫೇಸ್‌ಬುಕ್ ...

Read More »

ಇಂದಿರಾ ಗಾಂಧಿಯೊಂದಿಗೆ ಕನ್ನಡದ ವರನಟ ಡಾ। ರಾಜಕುಮಾರ್ ಅವರ ಹಳೆಯ ಛಾಯಾಚಿತ್ರದಲ್ಲಿ ಮೋದಿ?

ಕನ್ನಡದ ವರನಟ ಡಾ| ರಾಜಕುಮಾರ್ ಅವರೊಂದಿಗೆ ಇಂದಿರಾ ಗಾಂಧಿಯವರ ಹಳೆಯ ಕಪ್ಪು ಬಿಳುಪು ಛಾಯಾಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಲಿತವಾಗಿದ್ದು ಆ ಗುಂಪು ಛಾಯಾಚಿತ್ರದಲ್ಲಿ ಯುವ ನರೇಂದ್ರ ಮೋದಿ ಹಿಂದೆ ನಿಂತಿರುವುದು ತೋರಿಸಲಾಗಿದೆ. ಕೆಲವು ಕಾಂಗ್ರೆಸ್ ಮತ್ತು ಇತರ AIMIM ಬೆಂಬಲಿಗರು ಫೇಸ್ಬುಕ್ ನಲ್ಲಿ ಷೇರ್ ಮಾಡಿರುವ ಚಿತ್ರವು: “ಪ್ರಧಾನಿ ಮೋದಿ ಕಾಂಗ್ರೆಸ್ ಬೆಂಬಲಿಗರಾಗಿದ್ದರು. ನೀವು ಈಗ ಏನು ಹೇಳುತ್ತೀರಿ, ಭಕ್ತರೇ?” ಎಂದು ಹೇಳಿತು #Sameer_Ali_Farooqui ಮಾಡಿದ ಒಂದು ಪೋಸ್ಟ್ ಹೀಗಿದೆ: ಇದನ್ನು ಅಸದುದ್ದೀನ್ ಓವೈಸಿಯ AIMIM ಪಕ್ಷವನ್ನು ಬೆಂಬಲಿಸುವ ಮತ್ತೊಂದು ಫೇಸ್ಬುಕ್ ಪುಟವು ಇಲ್ಲಿ ...

Read More »

ಅಮೇಠಿಯಲ್ಲಿ ಮತದಾನ ಪತ್ರಗಳನ್ನು ಸಲ್ಲಿಸುವ ಸಮಯದಲ್ಲಿ ರಾಹುಲ್ ಗಾಂಧಿ ನಿಂತಿರಲಿಲ್ಲ?

ಕೆಲವು ಸಾಮಾಜಿಕ ಮಾಧ್ಯಮ ಸಂದೇಶಗಳು ಮತ್ತು ಫೋಟೋಗಳು ಅಮೇಠಿಯಲ್ಲಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ರಿಟರ್ನಿಂಗ್ ಅಧಿಕಾರಿಯ ಮುಂದೆ ಕುಳಿತಿರುವುದನ್ನು ತೋರಿಸಿವೆ, ಆದರೆ ಇತ್ತೀಚೆಗೆ ವಾರಣಾಸಿಯಲ್ಲಿ ತಮ್ಮ ಪತ್ರಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಿಂತಿರುವುದು ಸ್ಪಷ್ಟವಾಗಿದೆ . ನಾಮನಿರ್ದೇಶನ ಪತ್ರಗಳನ್ನು ಅಧಿಕಾರಿಗಳಿಗೆ ನೀಡುವಾಗ ನಿಲ್ಲುವ ರೂಢಿಯನ್ನು ರಾಹುಲ್ ಗಾಂಧಿಯವರು ಕಡೆಗಣಿಸಿದರು ಆದರೆ ಪ್ರಧಾನಿ ಮೋದಿ ಇದನ್ನು ಗೌರವಿಸಿ ಪಾಲಿಸಿದರು ಎಂಬುದು ವಾದ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದೇವಧರ್ ಸೇರಿದಂತೆ ಬಿಜೆಪಿ ಗುಂಪುಗಳಲ್ಲಿ ಇದನ್ನು ವ್ಯಾಪಕವಾಗಿ ಷೇರ್ ಮಾಡಲಾಯಿತು. ದೇವಧರ್ ...

Read More »

ಯೋಗೇಂದ್ರ ಯಾದವ್ ರವರ ಮೂಲ ಹೆಸರು ಸಲೀಮ್ ಎಂದೇ? ವಾಸ್ತವಾಂಶದ ಪರೀಕ್ಷೆ

ಬಿಜೆಪಿ IT ಸೆಲ್ ಮುಖ್ಯಸ್ಥರಾದ ಅಮಿತ್ ಮಾಳವೀಯರು ಇತ್ತೀಚಿಗಷ್ಟೇ ಒಂದು ವಿಡಿಯೋ ಟ್ವೀಟ್ ಮಾಡಿದರು, ಆ ವಿಡಿಯೋ ಪ್ರಕಾರ ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವರ ಮೊದಲ ಹೆಸರು ಸಲೀಮ್ ಎಂದಾಗಿತ್ತು ಮತ್ತು ಆತ ಅದೇ ಹೆಸರನ್ನು ಬಳಸಿ ಮತ ಯಾಚನೆ ಮಾಡಿದ್ದರು. ಅವರು ಹೇಳುವ ಪ್ರಕಾರ, “ನಾನು ಸಾಮಾನ್ಯವಾಗಿ ಟಿವಿ ಚರ್ಚೆಗಳನ್ನು ಸಾಮಾಜಿಕ ಜಾಲತಾಣಗಳಿಗೆ ಒಯ್ಯುವುದಿಲ್ಲ, ಆದರೆ ಯೋಗೇಂದ್ರ ಯಾದವರ ಇಬ್ಬದಿ ಮುಖವನ್ನು ಬಹಿರಂಗಪಡಿಸುವ ಸಲುವಾಗಿ ಈ ಬಾರಿ ಇಲ್ಲಿ ಮಾತನಾಡುತ್ತಿದ್ದೇನೆ.” ಮಾಳವೀಯರು ಷೇರ್ ಮಾಡಿದ ವಿಡಿಯೋ ಇಲ್ಲಿದೆ. ಇದರಲ್ಲಿ ಮುಸಲ್ಮಾನ ಸಮುದಾಯ ...

Read More »

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಇಂದು ಮತ ಚಲಾಯಿಸಿದರೇ? ವಾಸ್ತವಾಂಶದ ಪರೀಕ್ಷೆ

  2019 ರ ಏಪ್ರಿಲ್ 18 ರಂದು ಭಾರತೀಯ ಚುನಾವಣೆಗಳ ದ್ವಿತೀಯ ಹಂತ ಪ್ರಾರಂಭವಾಗುವುದರೊಂದಿಗೆ, ಗೂಗಲ್ ಸಿಇಒ ಸುಂದರ್ ಪಿಚೈಯವರ ಮನೆಯಾದ ತಮಿಳು ನಾಡಿನಲ್ಲಿ ನಡೆಯುತ್ತಿರುವ ಮತದಾನಕ್ಕೆ ಕಾಕತಾಳೀಯವೆಂಬಂತೆ ಒಂದು ಟ್ವೀಟ್ ವೈರಲ್ ಆಗಿತ್ತು. Google CEO sundar pichai caste his vote #Sarkar #OruViralPuratchi — SARKAR ASHOK (@ashok_nanban) April 18, 2019 @ashok_nanban ಎಂಬ ಟ್ವಿಟರ್ ಹ್ಯಾಂಡಲ್ ಹೊಂದಿರುವ ಸರ್ಕಾರ್ ಅಶೋಕ್ ಎಂಬವರು – ಗೂಗಲ್ ಸಿಇಒ ಭಾರತದ ಚುನಾವಣೆಗಳ ಮತದಾನ ಮಾಡಲು ಅಮೆರಿಕದಿಂದ ಬಂದಿದ್ದಾರೆಂದು ಟ್ವೀಟ್ ಮಾಡಿದರು. ...

Read More »

ಬಯಲಿಗೆಳೆಯಲಾಗಿದ್ದ ಸೋನಿಯಾ ಗಾಂಧಿಗೆ ಬರೆದ ನಕಲಿ ಲಿಂಗಾಯತ ಪತ್ರ ಕರ್ನಾಟಕದಲ್ಲಿ ಮತ್ತೊಮ್ಮೆ ಚರ್ಚೆಯಲ್ಲಿ

ಕರ್ನಾಟಕದಲ್ಲಿ, ಲಿಂಗಾಯತ ನಾಯಕರಾದ ಎಂ. ಬಿ. ಪಾಟೀಲರು ಬರೆದರೆಂದು ಹೇಳಲಾದ ಒಂದು ನಕಲಿ ಪತ್ರವನ್ನು ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕವು ಲೋಕ ಸಭಾ ಚುನಾವಣೆಗಳ ಮುನ್ನ ಟ್ವಿಟರ್ ನಲ್ಲಿ ಷೇರ್ ಮಾಡಿದ್ದಾರೆ. ಈ ಪಾತ್ರವನ್ನು ಎಂ. ಬಿ. ಪಾಟೀಲರು ಸೋನಿಯಾ ಗಾಂಧಿಯವರಿಗೆ ಹಿಂದೂಗಳ ವಿಭಜನೆಯ ವಿರುದ್ಧ ಜೂಲೈ 2017ರಲ್ಲಿ ಬರೆದಿದ್ದರು. Congress exposed The entire Lingayat & Veerashaiva community division was planted under direct instruction of Sonia Gandhi The letter written to Sonia Gandhi ...

Read More »

ಪ್ರಧಾನಿ ಮೋದಿ ಸೋನಿಯಾ ಗಾಂಧಿಯವರ ಪಾದಸ್ಪರ್ಶ ಮಾಡುತ್ತಿರುವುದು? ನಕಲಿ ಚಿತ್ರ ಆಗಿದೆ ವೈರಲ್

अपने बेटे से कहो 72 हजार और 22 लाख नौकरी के बारे में ना बोले नहीं तो मेरा क्या होगा गुजरात जाना पड़ेगा वहां की जनता भी अब जुमले में नहीं फसती 😀😀 pic.twitter.com/R5E6t0W2Wk — neha kumari { चौकीदार चोर है } (@SheikhMdTajUdd1) April 3, 2019 ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿಯವರ ಪಾದ ಸ್ಪರ್ಶಿಸುತ್ತಿರುವುದನ್ನು ತೋರಿಸುವ ಈ ಚಿತ್ರವನ್ನು ನೋಡಿ. ...

Read More »